Thursday, September 29, 2011

ತಿರುಗಾಟ - ಕನೂರ್ (ಎರಡು)

[ ನನಗೆ ಸಮಯದ ಅಭಾವವೋ , ಸಮಯಕ್ಕೆ ನನ್ನ ಅಭಾವವೋ ಗೊತ್ತಿಲ್ಲ!,
ಒಟ್ಟಿನಲ್ಲಿ ಟೈಮ್ ತುಂಬಾ ಬ್ಯುಸಿಯಾಗಿತ್ತು. ಒಂದೂವರೆ ವರ್ಷದ ನಂತರ
ಟೈಮ್ ಗೆ ಟೈಮ್ ಸಿಗ್ತು! ].

ರೋಡನ್ನು ಹೆಲಿಕಾಪ್ತೆರ್ ನಿಂದ ನೋಡಿದರೆ ತುಂಬಾ ಚೆನ್ನಾಗಿ ಕಾನುತಿತ್ತೇನೋ?.
ಅರ್ದ ದಾರಿ ಸವೆಸಿದಾಗ, ಒಂದು ಬ್ರೇಕ್. ಅಂಗಡಿಯಲ್ಲಿ ಸ್ವಲ್ಪ ಚಾಕಲೇಟ್,
ಸ್ವಲ್ಪ ಕರಿದ ತಿಂಡಿ ತಗೊಂಡು, ಮತ್ತೆ ಮುಂದೆ ಸಾಗಿತು ನಮ್ಮ ಪಯಣ.

ರೋಡಿನ ಸುತ್ತಲೂ ಕವಿದ ಮರಗಳು, ಮರಗಳಿಗೆ ಸುತ್ತಿಕೊಂಡಿದ್ದ ಬಳ್ಳಿಗಳು.
ಬಳ್ಳಿಗಳಿಗೆ ಜೋತುಬಿದ್ದ ಪೊದೆಗಳು. ಕೆಳಗೆ ಬಿದ್ದ ಎಲೆಗಳ ಹಾಸಿಗೆ, ಅಲ್ಲಲ್ಲಿ ಇಣುಕುವ ಮಣ್ಣು.
ಉದ್ದನೆಯ ಮರಗಳ ತುದಿಯಲ್ಲಿ ಅವಿತಿದ್ದ ಪಕ್ಷಿಗಳು. ಮರಗಳ ಹಿಂದೆ background ನಲ್ಲಿ
ಕಾಣುವ ನೀಲಿಯ ಆಗಸ. ಆ ಆಗಸಕ್ಕೆ ಟಾರ್ಚ್ ಹಾಕಿದ ಸೂರ್ಯ. ಆಗಸದ ಕೆಳೆಗೆ ಆ ಸುಡು ಬಿಸಿಲಿನಲ್ಲೂ
ಮಲಗಿರುವ ಪಶ್ಚಿಮ ಘಟ್ಟ!

ರಾಹುಲ್, ಸತ್ಯ ಮತ್ತು ನನಗೆ ಇವುಗಳಲ್ಲಿ ಹೊಸತೇನು ಕಾಣುತ್ತಿರಲಿಲ್ಲ.
ಬಟ್, ಸಿಟಿಯಲ್ಲಿ ನೆಲಸಿ ಬರೀ ಬಿಲ್ಡಿಂಗ್ ಗಳನ್ನು ನೋಡುತಿದ್ದ ನಮಗೆ,
ಹೊಸ ಚೇತನ, ಹೊಸ ಉತ್ಸಾಹದ ಸೆಲೆಯನ್ನೇ ನೀಡಿತ್ತು.

ಜೀಪು ಸ್ವಲ್ಪ ಹೊತ್ತಿನ ನಂತರ, ಟಾರ್ ರೋಡಿನಿಂದ ಕೆಳಗಿಳಿದು, ಮಣ್ಣಿನ ರೋಡ್ ಮೇಲೆ
ಸಾಗತೊಡಗಿತು. ನಾವುಗಳೆಲ್ಲರೂ ಕಾನೂರು ಕೋಟೆಯನ್ನು ನೋಡುವ ಉತ್ಹ್ಸಾಹದಲ್ಲಿದ್ದೆವು.
ಸ್ವಲ್ಪ ದಿನಗಳ ಹಿಂದೆಯೇ , ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ನೋಡಿದ ನಾನು ,
ಈ ಕೋಟೆ ಹೀಗಿರಬಹುದು , ಹಾಗಿರಬಹುದು ಅಂತ ಮನಸ್ಸಿನಲ್ಲೇ ಚಿತ್ರಿಸತೊಡಗಿದ್ದೆ .

ಅಲ್ಲಿ ಒಂದು ಗುಡಿಸಲು . ಗುಡಿಸಿಲ ಮುಂದೆ ಹುಳುವನ್ನು ಹೆಕ್ಕಿ ತಿನ್ನುತ್ತಿದ್ದ ಕೋಳಿ.
ಕೋಳಿಯ ಸುತ್ತಲೂ ಬಿತ್ತನೆ ಮಾಡಿ ಬೆಳೆ ತೆಗೆದು ಒಣಗಿದ ಗದ್ದೆಗಳು.
ಗದ್ದೆಗಳ ಮಧ್ಯ ಮತ್ತೆ ಅದೇ ಗುಡಿಸಲು!

ಒಂದು ಅಜ್ಜ ನಮ್ಮನ್ನು ಸ್ವಾಗತಿಸಿದ.

ಹತ್ತಿರದಲ್ಲೇ ಒಂದು ಮರ, ಮರದ ಕೆಳಗೆ ಟೆಂಟ್ ಹಾಕಿ, ರಾತ್ರಿ ಬೆಂಕಿ ಹಾಕಿ ಕಾಯಿಸತೊಡಗಿದರೆ!
ಸೂಪರ್! ಅದರ ಮಜಾನೆ ಬೇರೆ! ಪಾಂಡು ಆಗಲೇ ತನ್ನ ಪ್ಲಾನ್ ವಿವರಿಸತೊಡಗಿದ.

ನಮ್ಮ ಬ್ಯಾಗ್ ಗಳನ್ನು , ಗುಡಿಸಲ ಕಟ್ಟೆಯ ಮೇಲೆ ಬಿಟ್ಟೆವು.
ಧರ್ಮ ಮತ್ತು ಯೋಗರಾಜ್ (ನಮ್ಮ ಗೈಡ್ಸ್) ಬಳಿ ನಮ್ಮನ್ನು ಬಿಟ್ಟು
ನಮ್ಮ ಡ್ರೈವರ್ ಹೊರಟ. ಶಶಿ ಅವರಿಗೆ clear information ಕೊಟ್ಟಿದ್ದ.
ನಾಳೆ ಎಷ್ಟು ಹೊತ್ತಿಗೆ ವಾಪಾಸ್ ಬರಬೇಕು ಅಂತ.

ಜೀಪು ಕೋಟೆಯವರಿಗೂ ಹೋಗುತ್ತಿರಲಿಲ್ಲ. ಜೀಪಿನಿಂದ ಇಳಿದು , ಮತ್ತೆ ಆರು ಕಿಲೋಮೀಟರು
ಕಾಡಿನಲ್ಲಿ ನಡೆಯ ಬೇಕಿತ್ತು . ಅದಕ್ಕೆ ಪ್ಲಾನ್ ಸ್ವಲ್ಪ ಬದಲಾಯಿಸಿ ಸಂಜೆ / ನಾಳೆ ಕೋಟೆಗೆ
ಲಗ್ಗೆ ಹಾಕಲು ಯೋಚಿಸಿದೆವು .

ನಾವು ಡ್ರೆಸ್ ಚೇಂಜ್ ಮಾಡಿಕೊಂಡೆವು .
ಅರ್ದ ಗಂಟೆಯಲ್ಲಿ ನಮ್ಮ ಕಾಲುಗಳು , ಯೋಗಿ ಮತ್ತು ಧರ್ಮ ಅವರನ್ನು
ಹಿಂಬಾಲಿಸುತ್ತಿದ್ದವು, ನಮ್ಮ ಮನಸ್ಸು ಸುತ್ತಲಿನ nature ಅನ್ನು ಅಸ್ವಾದಿಸುತಿತ್ತು.....

(ಮುಂದುವರೆಯುತ್ತದೆ)

Thursday, June 17, 2010

ತಿರುಗಾಟ - ಕಾನೂರು (ಒಂದು)


ಮನೆಯಿಂದ ಹೊರಟಾಗ ೭ ಗಂಟೆಯಾಗಿ ಹೋಗಿತ್ತು. ಇನ್ನು ಹತ್ತೆ ನಿಮಿಷ. ಅಷ್ಟರಲ್ಲಿ ೨ ಕಿ ಮಿ ದೂರ ಇರುವ ಬಸ್ ಸ್ಟ್ಯಾಂಡ್ ತಲುಪ ಬೇಕು. ಆ ಬಸ್ ಮಿಸ್ ಆದರೆ ಮುಂದಿನ ಬಸ್ ಇರೋದು ೯ ಗಂಟೆಗೆ. ಬೈಕ್ ಸ್ಟಾರ್ಟ್ ಮಾಡುವಾಗ ಏನಾದರು ಮರೆಯಿತೋ ಎಂದು ಯೋಚನೆ ಮಾಡುತ್ತ ಮಾಡುತ್ತ ಮುಂದೆ ಹೋಗುತ್ತಿದ್ದ ಟೈಮ್ ಅನ್ನೇ ಮರೆತು ಬಿಟ್ಟೆ.

ಅಂತು ಇಂತು ಬಸ್ ಸ್ಟ್ಯಾಂಡ್ ತಲುಪಿದಾಗ, ಬಂಗಾರಪ್ಪ ಕಟ್ಟಿಸಿದ ಬಸ್ ಸ್ಟ್ಯಾಂಡ್ ನನ್ನ ನೋಡಿ ಮುಸಿ ಮುಸಿ ನಗುತ್ತಿತ್ತೋ ಎಂದು ಅನಿಸಿತು. ಬಸ್ ಮಿಸ್ ಆಗಿರೋದು ಗ್ಯಾರಂಟಿ ಅಂತ ಅರಿವು ಹೇಳಿತು. ಹಿಂದೆ ಕುಳಿತಿದ್ದ ಅಪ್ಪ ಕೂಡ ಹಾಗೆ ಹೇಳಿದ.

ಹೊಡಿ.

ಸುಮಾರು ೫ ಕಿ ಮಿ ನಂತರ ಬಸ್ chase ಮಾಡಿದ ಹೆಮ್ಮೆ ನನ್ನ ಬೈಕ್ ಗೆ.

ಸಾಗರ ತಲುಪುವುದಕ್ಕೂ, ಮೊಬೈಲ್ ರಿಂಗ್ ಆಗುವುದಕ್ಕೂ ಏನು ಕನೆಕ್ಷನ್ ಎಂದು ಯೋಚಿಸುತ್ತ ಕಾಲ್ receive ಮಾಡಿದೆ. 'ಇನ್ನು ೧೦ ನಿಮಿಷದಲ್ಲಿ ಸಾಗರ ದಲ್ಲಿ ಇರುತ್ತೇವೆ' ಎಂದ ರಾಹುಲ್. ಪರಮಾತ್ಮ, ೯ ೩೦ ಎಂದು ಹೇಳಿದವರು ಫುಲ್ ೧ ಗಂಟೆ ೨೦ ನಿಮಿಷ ಮೊದಲೇ ಬಂದಿದ್ದಾರೆ. ಒಂದೊಂದು ನಿಮಿಷವೂ important ಅಂತ ಬಸ್ ಮಿಸ್ ಆದಾಗಲೂ ನನಗೆ ಅನಿಸಿರಲಿಲ್ಲ.

ಪಕ್ಕದಲ್ಲೇ ಇದ್ದ ಆಟೋದವನ ಕಣ್ಣು ನನ್ನನ್ನೇ ನೋಡುತ್ತಾ ಇತ್ತು. 'mamcos ಗೆ ಹೋಗು' ಎಂದಾಗ ಅವನ ಕಣ್ಣಲ್ಲಿನ ನಿರಾಸೆ ಯನ್ನು ನಾನು ನೋಡಿದರೂ ಗಮನಿಸಲಿಲ್ಲ. ೫ ದೇ ನಿಮಿಷದಲ್ಲಿ ಆಟೋ mamcos ಬಳಿ ಇತ್ತು, ನಾನು oracle server ಬಳಿ ಇದ್ದೆ.

ಮತ್ತೆ ಕಾಲ್. 'already ಸಾಗರ ತಲುಪಿದ್ದೇವೆ' ಎಂದ ರಾಹುಲ್. ಇಲ್ಲಿ Oracle database corrupt ಆಗಿತ್ತು. '೧೫ ದೇ ನಿಮಿಷ, ಬಂದು ಬಿಟ್ಟೆ' ಎಂದಾಗ ನನಗೇ ಅದು ಸಾಧ್ಯವೇ ಎನಿಸಿತ್ತು.

೯ ಗಂಟೆ. 'ಇಲ್ಲ ಇನ್ನು wait ಮಾಡಲು ಆಗೋಲ್ಲ. ಒಂದು ಕೆಲಸ ಮಾಡು, ನಾವು ಸತ್ಯನ ಮನೆಗೆ ಹೋಗಿ ರೆಡಿ ಆಗಿರುತ್ತೇವೆ. ನೀನು ೯.೩೦ ಗೆ ಇರೋ next ಬಸ್ ಗೆ ಬಾ' ಎಂದು ಹೇಳುತ್ತಾ ರಾಹುಲ್ ಫೋನ್ ಕಟ್ ಮಾಡಿದ. Oracle database up ಆಗಲೇ ಇಲ್ಲ. ಶನಿವಾರ ಬೇರೆ.

ಯಾವುದಾದರೂ ಒಂದನ್ನು ಕೈ ಬಿಡಲೇ ಬೇಕು. ಫ್ರೆಂಡ್ಸ್ ಜೊತೆಗಿನ ಟ್ರಿಪ್? ಅಥವಾ ಕ್ಲೈಂಟ್ server
ಸರಿ ಮಾಡುವುದು. "ಎರಡೂ ದೋಣಿ ಲಿ ಕಾಲು ಇಟ್ಟರೆ, ಮುಳುಗೂದು ನೀನೆ ಹೊರತು ದೋಣಿ ಅಲ್ಲ" ಎಂದಿತು ಮನಸ್ಸು.

'ದೋಣಿಗೆ ಈಜು ಬರುತ್ತಾ?!'...

ಕೊನೆ ಗೆ ಹೊಳೆದಿದ್ದೇ ಆ ಉಪಾಯ. ಎರಡನೇ ದೋಣಿಯನ್ನು ಆಫೀಸ್ ಗೆ ಪಾರ್ಸೆಲ್ ಮಾಡಿಬಿಟ್ಟೆ. ಮ್ಯಮ್ಕಾಸ್ ನವರು ಒಲ್ಲದ ಮನಸಿನಿಂದ ನನ್ನನ್ನು ಮೇನ್ ಬಸ್ ಸ್ಟ್ಯಾಂಡ್ ಗೆ ಡ್ರಾಪ್ ಮಾಡಿದರು. ೯ ೩೦ ಗೆ ಕಾರ್ಗಲ್ ಹೋಗುವ ಬಸ್ಸೆಂಬ ದೋಣಿಯಲ್ಲಿ ನಾನಿದ್ದೆ. ನಂತರ ಪೂರ್ತಿ ನಿದ್ದೆ.

ಕಾರ್ಗಲ್. ಜೋಗ ದಿಂದ ೫ ಕಿ ಮಿ ದೂರದ ಸುಂದರ ಊರು. ಅಲ್ಲಿ ತಲುಪಿದಾಗ ೧೦ ೧೫. ಅಷ್ಟರಲ್ಲಿ ನನ್ನ ಸಪ್ತ ಮಿತ್ರರು ಸ್ನಾನ ತಿಂಡಿ ತಿಂದು ರೆಡಿ ಯಾಗಿದ್ದರು. ನನಗೂ ರುಚಿಯಾದ ಕೇಸರಿ ಬಾತ್, ಇಡ್ಲಿ ತಿನ್ನುವ ಭಾಗ್ಯ. ಕಾನೂರಿಗೆ ಹೋಗುವ ಜೀಪ್ ಕೂಡ ರೆಡಿ ಯಾಗಿತ್ತು. ಪಾಪ, ಕ್ಯೂ ನಲ್ಲಿದ್ದ ಇಡ್ಲಿಗಳು ಬೇಗ ಬೇಗ ಬಾಯಿ ಸೇರಿದವು.

ಮುಂದಿನ ಐದೇ ನಿಮಿಷದಲ್ಲಿ ಮೇನ್ ರೋಡ್ ಜೀಪಿನ tyre ಕೆಳಗೆ ಸವೆದು ಹೋಗುತ್ತಿತ್ತು.

(ತಿರುಗಾಟ - ಮುಂದುವರೆಯುತ್ತೆ...)