Thursday, September 29, 2011

ತಿರುಗಾಟ - ಕನೂರ್ (ಎರಡು)

[ ನನಗೆ ಸಮಯದ ಅಭಾವವೋ , ಸಮಯಕ್ಕೆ ನನ್ನ ಅಭಾವವೋ ಗೊತ್ತಿಲ್ಲ!,
ಒಟ್ಟಿನಲ್ಲಿ ಟೈಮ್ ತುಂಬಾ ಬ್ಯುಸಿಯಾಗಿತ್ತು. ಒಂದೂವರೆ ವರ್ಷದ ನಂತರ
ಟೈಮ್ ಗೆ ಟೈಮ್ ಸಿಗ್ತು! ].

ರೋಡನ್ನು ಹೆಲಿಕಾಪ್ತೆರ್ ನಿಂದ ನೋಡಿದರೆ ತುಂಬಾ ಚೆನ್ನಾಗಿ ಕಾನುತಿತ್ತೇನೋ?.
ಅರ್ದ ದಾರಿ ಸವೆಸಿದಾಗ, ಒಂದು ಬ್ರೇಕ್. ಅಂಗಡಿಯಲ್ಲಿ ಸ್ವಲ್ಪ ಚಾಕಲೇಟ್,
ಸ್ವಲ್ಪ ಕರಿದ ತಿಂಡಿ ತಗೊಂಡು, ಮತ್ತೆ ಮುಂದೆ ಸಾಗಿತು ನಮ್ಮ ಪಯಣ.

ರೋಡಿನ ಸುತ್ತಲೂ ಕವಿದ ಮರಗಳು, ಮರಗಳಿಗೆ ಸುತ್ತಿಕೊಂಡಿದ್ದ ಬಳ್ಳಿಗಳು.
ಬಳ್ಳಿಗಳಿಗೆ ಜೋತುಬಿದ್ದ ಪೊದೆಗಳು. ಕೆಳಗೆ ಬಿದ್ದ ಎಲೆಗಳ ಹಾಸಿಗೆ, ಅಲ್ಲಲ್ಲಿ ಇಣುಕುವ ಮಣ್ಣು.
ಉದ್ದನೆಯ ಮರಗಳ ತುದಿಯಲ್ಲಿ ಅವಿತಿದ್ದ ಪಕ್ಷಿಗಳು. ಮರಗಳ ಹಿಂದೆ background ನಲ್ಲಿ
ಕಾಣುವ ನೀಲಿಯ ಆಗಸ. ಆ ಆಗಸಕ್ಕೆ ಟಾರ್ಚ್ ಹಾಕಿದ ಸೂರ್ಯ. ಆಗಸದ ಕೆಳೆಗೆ ಆ ಸುಡು ಬಿಸಿಲಿನಲ್ಲೂ
ಮಲಗಿರುವ ಪಶ್ಚಿಮ ಘಟ್ಟ!

ರಾಹುಲ್, ಸತ್ಯ ಮತ್ತು ನನಗೆ ಇವುಗಳಲ್ಲಿ ಹೊಸತೇನು ಕಾಣುತ್ತಿರಲಿಲ್ಲ.
ಬಟ್, ಸಿಟಿಯಲ್ಲಿ ನೆಲಸಿ ಬರೀ ಬಿಲ್ಡಿಂಗ್ ಗಳನ್ನು ನೋಡುತಿದ್ದ ನಮಗೆ,
ಹೊಸ ಚೇತನ, ಹೊಸ ಉತ್ಸಾಹದ ಸೆಲೆಯನ್ನೇ ನೀಡಿತ್ತು.

ಜೀಪು ಸ್ವಲ್ಪ ಹೊತ್ತಿನ ನಂತರ, ಟಾರ್ ರೋಡಿನಿಂದ ಕೆಳಗಿಳಿದು, ಮಣ್ಣಿನ ರೋಡ್ ಮೇಲೆ
ಸಾಗತೊಡಗಿತು. ನಾವುಗಳೆಲ್ಲರೂ ಕಾನೂರು ಕೋಟೆಯನ್ನು ನೋಡುವ ಉತ್ಹ್ಸಾಹದಲ್ಲಿದ್ದೆವು.
ಸ್ವಲ್ಪ ದಿನಗಳ ಹಿಂದೆಯೇ , ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ನೋಡಿದ ನಾನು ,
ಈ ಕೋಟೆ ಹೀಗಿರಬಹುದು , ಹಾಗಿರಬಹುದು ಅಂತ ಮನಸ್ಸಿನಲ್ಲೇ ಚಿತ್ರಿಸತೊಡಗಿದ್ದೆ .

ಅಲ್ಲಿ ಒಂದು ಗುಡಿಸಲು . ಗುಡಿಸಿಲ ಮುಂದೆ ಹುಳುವನ್ನು ಹೆಕ್ಕಿ ತಿನ್ನುತ್ತಿದ್ದ ಕೋಳಿ.
ಕೋಳಿಯ ಸುತ್ತಲೂ ಬಿತ್ತನೆ ಮಾಡಿ ಬೆಳೆ ತೆಗೆದು ಒಣಗಿದ ಗದ್ದೆಗಳು.
ಗದ್ದೆಗಳ ಮಧ್ಯ ಮತ್ತೆ ಅದೇ ಗುಡಿಸಲು!

ಒಂದು ಅಜ್ಜ ನಮ್ಮನ್ನು ಸ್ವಾಗತಿಸಿದ.

ಹತ್ತಿರದಲ್ಲೇ ಒಂದು ಮರ, ಮರದ ಕೆಳಗೆ ಟೆಂಟ್ ಹಾಕಿ, ರಾತ್ರಿ ಬೆಂಕಿ ಹಾಕಿ ಕಾಯಿಸತೊಡಗಿದರೆ!
ಸೂಪರ್! ಅದರ ಮಜಾನೆ ಬೇರೆ! ಪಾಂಡು ಆಗಲೇ ತನ್ನ ಪ್ಲಾನ್ ವಿವರಿಸತೊಡಗಿದ.

ನಮ್ಮ ಬ್ಯಾಗ್ ಗಳನ್ನು , ಗುಡಿಸಲ ಕಟ್ಟೆಯ ಮೇಲೆ ಬಿಟ್ಟೆವು.
ಧರ್ಮ ಮತ್ತು ಯೋಗರಾಜ್ (ನಮ್ಮ ಗೈಡ್ಸ್) ಬಳಿ ನಮ್ಮನ್ನು ಬಿಟ್ಟು
ನಮ್ಮ ಡ್ರೈವರ್ ಹೊರಟ. ಶಶಿ ಅವರಿಗೆ clear information ಕೊಟ್ಟಿದ್ದ.
ನಾಳೆ ಎಷ್ಟು ಹೊತ್ತಿಗೆ ವಾಪಾಸ್ ಬರಬೇಕು ಅಂತ.

ಜೀಪು ಕೋಟೆಯವರಿಗೂ ಹೋಗುತ್ತಿರಲಿಲ್ಲ. ಜೀಪಿನಿಂದ ಇಳಿದು , ಮತ್ತೆ ಆರು ಕಿಲೋಮೀಟರು
ಕಾಡಿನಲ್ಲಿ ನಡೆಯ ಬೇಕಿತ್ತು . ಅದಕ್ಕೆ ಪ್ಲಾನ್ ಸ್ವಲ್ಪ ಬದಲಾಯಿಸಿ ಸಂಜೆ / ನಾಳೆ ಕೋಟೆಗೆ
ಲಗ್ಗೆ ಹಾಕಲು ಯೋಚಿಸಿದೆವು .

ನಾವು ಡ್ರೆಸ್ ಚೇಂಜ್ ಮಾಡಿಕೊಂಡೆವು .
ಅರ್ದ ಗಂಟೆಯಲ್ಲಿ ನಮ್ಮ ಕಾಲುಗಳು , ಯೋಗಿ ಮತ್ತು ಧರ್ಮ ಅವರನ್ನು
ಹಿಂಬಾಲಿಸುತ್ತಿದ್ದವು, ನಮ್ಮ ಮನಸ್ಸು ಸುತ್ತಲಿನ nature ಅನ್ನು ಅಸ್ವಾದಿಸುತಿತ್ತು.....

(ಮುಂದುವರೆಯುತ್ತದೆ)

No comments:

Post a Comment